Categories
Report

ಲಕ್ನೋದಲ್ಲಿ ‘ಧಾಯಿ ಅಖರ್ ಪ್ರೇಮ್’ ಸಾಂಸ್ಕೃತಿಕ ತಂಡದ ಒಂದು ದಿನದ ಪಾದಯಾತ್ರೆ

हिन्दी | English | বাংলা | ಕನ್ನಡ | മലയാളം

ದೇಶದ ಎಲ್ಲಾ ಪ್ರಗತಿಪರ, ಪ್ರಜಾಸತ್ತಾತ್ಮಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಸಹಕಾರದೊಂದಿಗೆ 2023 ರ ಸೆಪ್ಟೆಂಬರ್ 28 ರಂದು ಭಗತ್ ಸಿಂಗ್ ಅವರ ಜನ್ಮದಿನದಂದು ಆಳ್ವಾರ್ (ರಾಜಸ್ಥಾನ) ನಿಂದ ಪ್ರಾರಂಭಿಸಿ, ದೇಶದ ವಿವಿಧ ರಾಜ್ಯಗಳಲ್ಲಿ ಹಾದು ಮಹಾತ್ಮಾ ಗಾಂಧಿಯವರ ಹುತಾತ್ಮ ದಿನ 30 ಜನವರಿ 2024 ರಂದು ‘ಧಾಯಿ ಅಖರ್ ಪ್ರೇಮ್ ಸಾಂಸ್ಕೃತಿಕ ಜಾಥಾ ದೆಹಲಿಯಲ್ಲಿ ಕೊನೆಗೊಳ್ಳುತ್ತದೆ. ‘ಧಾಯಿ ಅಖರ್ ಪ್ರೇಮ್; ‘ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ’ ಅಡಿಯಲ್ಲಿ, 06 ಅಕ್ಟೋಬರ್ 2023 ರಂದು ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಒಂದು ದಿನದ ಸಾಂಸ್ಕೃತಿಕ ಪ್ರವಾಸಗಳ ಸರಣಿಯಲ್ಲಿ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.

ಇದಾದ ಬಳಿಕ ‘ಧೈ ಅಖರ್ ಪ್ರೇಮ್ ರಾಷ್ಟ್ರೀಯ ಸಾಂಸ್ಕೃತಿಕ ಸಮೂಹ ಸಂಘಟನಾ ಸಮಿತಿ ಲಖನೌ’ ಸಹಯೋಗದಲ್ಲಿ ವಿಶ್ವವಿಖ್ಯಾತ ನಾಟಕಕಾರ, ನಿರ್ದೇಶಕ ಹಾಗೂ ಇಪ್ಟಾದ ರಾಷ್ಟ್ರೀಯ ಅಧ್ಯಕ್ಷ ಪ್ರಸನ್ನ ಹಾಗೂ ಹಿರಿಯ ರಂಗಕರ್ಮಿ ಹಾಗೂ ಇಪ್ಟಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್ ಅವರ ನೇತೃತ್ವದಲ್ಲಿ 21 ಅಕ್ಟೋಬರ್ 2023ರಂದು ಲಕ್ನೋದಲ್ಲಿ ಮತ್ತೆ ಒಂದು ದಿನ ಆಯೋಜಿಸಲಾಗಿದ್ದ ಜಾಥಾ ಮೆರವಣಿಗೆಯ ಮುಖಾಂತರ ಕೊನೆಗೊಂಡಿತು. ಈ ಸಾಂಸ್ಕೃತಿಕ ಪಾದಯಾತ್ರೆಯು ಲೋಂಗಾ ಖೇಡಾ ಖಾರಿಕಾ ಪಂಚಾಯತ್ ಭವನದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯಿಂದ ಪ್ರಾರಂಭವಾಗಿ. ಘೋಸಿಯಾನ, ವೃಂದಾವನ ಕಾಲೋನಿ ಪ್ರಾಥಮಿಕ ಶಾಲೆ ಮೂಲಕ ಸಾಗಿ, ಗೋಪ್ ಇಂಟರ್ ಕಾಲೇಜ್ ಬಲದೇವ್ ವಿಹಾರ್ ತಲುಪಿತು, ಅಲ್ಲಿ ಪ್ರಯಾಣ ಕೊನೆಗೊಂಡಿತು.

ಯಾತ್ರೆಯ ಆರಂಭದ ಸ್ಥಳವಾದ ಗ್ರಾಮ ಲೋಂಗ ಖೇಡ ಖಾರಿಕಾ ಪಂಚಾಯತ್ ಭವನದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಇಪ್ಟಾ ರಾಷ್ಟ್ರೀಯ ಅಧ್ಯಕ್ಷ ಪ್ರಸನ್ನ. ಈ ಸಾಂಸ್ಕೃತಿಕ ಮೆರವಣಿಗೆಯು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ ಬದಲಾಗಿ ಸಮಾಜದಲ್ಲಿ ಪರಸ್ಪರ ಸೌಹಾರ್ದತೆ, ಪ್ರೀತಿ ಮತ್ತು ಸಹೋದರತ್ವವನ್ನು ಸ್ಥಾಪಿಸಲು ನಿಮ್ಮ ಭಾಗವಹಿಸುವಿಕೆ ಇಲ್ಲದೆ ಸಾಧ್ಯವಿಲ್ಲ. ಈ ಮಹಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರಸನ್ನ ಮನವಿ ಮಾಡಿದರು. ಇಪ್ಟಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್ ವೇದಾ ತಮ್ಮ ಭಾಷಣದಲ್ಲಿ ಜನರ ನಡುವೆ ಹೋಗಿ ಅವರೊಡನೆ ಸಂವಾದ ಸ್ಥಾಪಿಸುವ ಇಪ್ಟಾ ಇತಿಹಾಸ ಬಹಳ ಹಳೆಯದು, ಇಂದು ಅದೇ ಅನುಕ್ರಮದಲ್ಲಿ ಇಪ್ಟಾದ ಈ ಸಾಂಸ್ಕೃತಿಕ ಯಾತ್ರೆಯು ದೇಶದಲ್ಲಿ ಹರಡಿರುವ ದ್ವೇಷವನ್ನು. ವಿಭಜನೆ, ಅನ್ಯಾಯ ಮತ್ತು ಕ್ರೌರ್ಯಕ್ಕೆ ಪ್ರತಿಕ್ರಿಯೆಯಾಗಿ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವಕ್ಕಾಗಿ ಪ್ರತಿಜ್ಞೆ ಮಾಡಲು ಅವರು ನಿಮ್ಮ ನಡುವೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಇಪ್ಟಾ ರಾಷ್ಟ್ರೀಯ ಸಮಿತಿ ಸದಸ್ಯ ಓಂ ಪ್ರಕಾಶ್ ನದೀಂ ಅವರು ಸಂವಿಧಾನ ರಚನಾಕಾರ ಭಾರತ ರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಅವರ ಪ್ರತಿಮೆ ಎದುರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಲಿಟಲ್ IPTA ಮತ್ತು IPTA ಲಕ್ನೋದ ಸ್ನೇಹಿತರು ’ಧಾಈ ಆಖರ್ ಪ್ರೇಮ್ ಕ ಪಡನೆ ಔರ್ ಪಡಾನೆ ಆಯೆ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿಟಾನೆ ಆಯೆ ಹೈ’ ಎಂಬ ಆವಾಹನ ಹಾಡನ್ನು ಹಾಡಿದರು, ‘ಮೇರೇ ಸರ್ ಸೆ ತಲೇ ಬಲ, ಮೇರೀ ಮಾಲಾ ತೂಟಿ, ಕಬೀರ ಭಾಲಾ ಹೂಆ’ ಜೊತೆಗೆ ‘ಹಮೀನ್ ಭೀ ದಿಖಾ ದೋ ಕಿತಾಬೊ ಕಿ ದುನಿಯಾ’. ಎಂಬ ಕಬೀರನ ಗೀತೆ ಹಾಡಿದರು ಮತ್ತು ಶಂಕರ್ ಅವರ ನಿರ್ದೇಶನದಲ್ಲಿ, ರಷ್ಯಾದ ಕಥೆಗಾರ ಆಂಟನ್ ಚೆಕೊವ್ ಅವರ ಕಥೆ ‘ಗಿರ್ಗಿತ್’ (ರಮೇಶ್ ಉಪಾಧ್ಯಾಯ ಅವರ ನಾಟಕ ರೂಪಾಂತರ) ಪ್ರಸ್ತುತಪಡಿಸಲಾಯಿತು. ಸ್ಥಳೀಯ ಯಾತ್ರೆಯ ಸಂಯೋಜಕ, ಮಾಜಿ ಪುರಸಭಾ ಸದಸ್ಯ ಮುನ್ನಾ ಲಾಲ್ ಕುರಿಲ್ ಯಾತ್ರೆ ತಂಡವನ್ನು ಸ್ವಾಗತಿಸಿದರು.

ಸಾಂಸ್ಕೃತಿಕ ಬಳಗದ ಗೆಳೆಯರು ಪ್ರೊ.ಪಿ.ಘೋಸಿಯಾನ, ಮಾಜಿ ಪುರಸಭಾ ಸದಸ್ಯ ಮುನ್ನಾ ಲಾಲ್ ಕುರಿಲ್ ಅವರ ಮನೆ ಹತ್ತಿರ, ವೃಂದಾವನ ಕಾಲೋನಿ, ಹಳ್ಳಿಗಳು ಮತ್ತು ಮಾರುಕಟ್ಟೆಗಳಲ್ಲಿ ಹಾಡುತ್ತಾ ಆಡುತ್ತಾ, ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾ, ಅವರು ತಮ್ಮ ಕೊನೆಯ ನಿಲ್ದಾಣವಾದ ಗೋಪ್ ಇಂಟರ್ ಕಾಲೇಜು ಬಲದೇವ್ ವಿಹಾರ ಆವರಣದಲ್ಲಿ ಜಾನಪದ ಹಾಡುಗಳು ಮತ್ತು ಬೀದಿ ನಾಟಕಗಳನ್ನು ಪ್ರದರ್ಶಿಸಿದರು. ಯಾತ್ರೆಯ ಸಮಾರೋಪದಲ್ಲಿ ಕಾಲೇಜು ವ್ಯವಸ್ಥಾಪಕ ವಿಮಲ್ ಯಾದವ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಯಾತ್ರೆಯಲ್ಲಿ, ರಾಜ್ಯ ಪ್ರವಾಸ ಸಂಯೋಜಕ ಮತ್ತು ಯುಪಿ ಇಪ್ಟಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಹಜಾದ್ ರಿಜ್ವಿ, ರಾಷ್ಟ್ರೀಯ ಸಮಿತಿ ಸದಸ್ಯರಾದ ಓಂ ಪ್ರಕಾಶ್ ನದೀಮ್ ಮತ್ತು ಸಂಧ್ಯಾ ರಸ್ತೋಗಿ, ರಾಜ್ಯ ಸಂಘಟನೆಯ ಕಾರ್ಯದರ್ಶಿ ದೀಪಕ್ ಕಬೀರ್, ಪ್ರಾದೇಶಿಕ ಕಾರ್ಯದರ್ಶಿ ಮತ್ತು ಲಿಟಲ್ ಇಪ್ಟಾ ಲಖನೌ ಸಂಚಾಲಕಿ ಶ್ರೀಮತಿ ಸುಮನ್ ಶ್ರೀವಾಸ್ತವ, ರಾಹುಲ್ ಸಿಂಗ್, ಇಚ್ಚಾ. ಶಂಕರ್, ವಿಪಿನ್ ಮಿಶ್ರಾ, ಸೋನಿ ಯಾದವ್, ದಾಮಿನಿ, ಕವಿತಾ ಯಾದವ್, ಸವಿತಾ ಯಾದವ್, ಬಬಿತಾ ಯಾದವ್, ಪೂಜಾ ಪ್ರಜಾಪತಿ, ಆರತಿ ಪ್ರಜಾಪತಿ, ಗರಿಮಾ, ಶಿವಿ ಸಿಂಗ್, ಪ್ರಿಯಾ ನಗರ್, ವೈಭವ್ ಶುಕ್ಲಾ, ಹರ್ಷಿತ್ ಶುಕ್ಲಾ, ರಾಹುಲ್ ಪಾಂಡೆ, ಹನಿ ಖಾನ್, ಕೃಷ್ಣ ಗುಪ್ತಾ, ಅಂಕಿತ್, ಕೃಷ್ಣ ಸಿಂಗ್ ಆದಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ವರದಿ – ಶಹಜಾದ್ ರಿಜ್ವಿ,
ರಾಜ್ಯ ಯಾತ್ರಾ ಸಂಯೋಜಕರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ IPTA

ಅನುವಾದ: ಇರ್ಫಾನ್ ಅಹಮದ್

Spread the love
%d bloggers like this: