Categories
Video

ಪ್ರೀತಿಯ ಯಾತ್ರೆಯ ಹಾಡು | Jatha Song on Love | Preetiya Yatreya Hadu | Kannada


The wind of love for love and equality is blowing from the terraces towards the mohallas. Let us unite beyond the boundaries of caste and religion, my friend… 
ಪ್ರೀತಿ ಮತ್ತು ಸಮತರಗಾಗಿ ಪ್ರೀತಿಯ ಗಾಳಿ ಹಟ್ಟಗಕಡೆಯಿಂದ ಮೊಹಲ್ಲಾಗಳ ಕಡೆಗೆ ಬೀಸುತಿದೆ. ನಾವು ಜಾತಿ ಧರ್ಮದ ಗಡಿಗಳನ್ನ ಮೀರಿ ಒಂದಾಗೋಣಬಾ ಗೆಳೆಯಾ

ಪ್ರೀತಿಯ ಗಾಳಿಬೀಸುತಿದೆ

ಪ್ರೀತಿಯ ಗಾಳಿ ಬೀಸುತಿದೆ
ಹಟ್ಟಿ ಮೊಹಲ್ಲಗಳಾ ನಡುವೆ
ಗಡಿಗಳ ಮೀರಿ ಗೆಳೆತನವ ಮಾಡೋಣ ಬಾ ನನ್ನ ಸಂಗಾತಿ

ಸ್ಪಶ್ಯ ಅಸ್ಪಶ್ಯತೆ ಬೇಲಿಗಳು
ಜಾತಿ ಧರ್ಮದ ಗೋಡೆಗಳು
ಎಲ್ಲವ ದಾಟಿ ಎತ್ತರಕೆ ಹಾರೋಣ ಬಾ ನನ್ನ ಸಂಗಾತಿ

ಅವ್ವನ ಪ್ರೀತಿಗೆ ಕೈಮುಗಿದು
ಅಪ್ಪನ ಮಮತೆಗೆ ಶರಣೆಂದು
ಹೊಸಿಲ ದಾಟಿ ಬಾ ಹೊಸ ಸಂಬಂಧ ಕಟ್ಟೋಣ ಬಾ

ನನ್ನ ನಿನ್ನ ಈ ಸ್ನೇಹ
ಒಪ್ಪದಿರಬಹುದು ಸಮಾಜ
ತಪ್ಪೆಂದಾದರೆ ಆಗಲಿ ತಪ್ಪ ಮಾಡೋಣ ಬಾ ನನ್ನ ಸಂಗಾತಿ

ನಿನ್ನೆಯ ತಪ್ಪು ಇಂದು ಸರಿ
ಇಂದಿನ ತಪ್ಪು ನಾಳೆ ಸರಿ ಕಾಲ
ದೇಶಕ್ಕೆ ಬದಲಾಗುವುದು ತಪ್ಪು ಸರಿ ನನ್ನ ಸಂಗಾತಿ

ಬದಲಾವಣೆಯಲ್ಲಿ ನೋವು ಇದೆ
ಮೌಲ್ಯಗಳ ಸಂಘರ್ಷವಿದೆ
ಇಂದಲ್ಲ ನಾಳೆ ಬದಲಾಗುವುದು ಜನ ಮನ ನನ್ನ ಸಂಗಾತಿ

ಬದಲಾಗದಿದ್ದರೆ ನಾವಿಂದು
ಜಗವ ಬದಲಾಯಿಸುವೆವು ಎಂದು
ಬದಲಾವಣೆಯು ಶುರುವಾಗುವುದು ನಮ್ಮಿಂದಲೇ ನನ್ನ ಸಂಗಾತಿ

Love is in the air
Across huts and mohallas
Come dear comrade, let the friendship bloom beyond boundaries

Break the fences of touchability and untouchability
Shatter the walls of castes and religions
Come dear comrade, let’s fly high

Salute mother’s love and father’s affection
Come out to build new relationships

Society around may not accept this friendship
If it’s wrong, let’s do the wrong dear friend

What’s wrong yesterday is right today and what’s wrong today shall be right tomorrow
Right and wrong ever change with space and time

Change is pain, it’s conflict of values
Minds and masses shall change as the time goes by

If we can’t change today, how do we bring the change
Let it begin with us!

Spread the love
%d bloggers like this: